
30th July 2025
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅಭಿಮತ
ಹಿರಿಯ ಸಾಹಿತಿ ಶಿರಿಷ್ ಜೋಶಿ ಯವರ ಸಾಹಿತ್ಯ ಸೇವೆ ಬಹುಮುಖಿಯಾಗಿದ್ದು ರಂಗಭೂಮಿ ಚಲನಚಿತ್ರ, ಕ್ಷೇತ್ರ ದರ್ಶನ ಕಾದಂಬರಿಗಳು, ವ್ಯಕ್ತಿ ಚಿತ್ರಣಗಳು, ನಾಡು ನುಡಿ ಕುರಿತಾದ ಗ್ರಂಥಗಳು ವಿಶೇಷವಾಗಿ ಕರ್ನಾಟಕದ ಏಳು ಜನ ಸಂಗೀತ ಲೋಕದ ದಿಗ್ಗಜರ ಕುರಿತಾದ ಮಾಹಿತಿ ಪೂರ್ವಕ ಕೃತಿಗಳು ನಿಜಕ್ಕೂ ಅವರ ಅಧ್ಯಯನ ಶೀಲತೆ ಮತ್ತು ಸಾಹಿತ್ಯ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸೋಮವಾರ ದಿ. 28ರಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿಕ ಭವನದ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾದ 'ನುಡಿ ತೇರಿಗೆ ನೂರೊಂದು ನಮನ 'ಸರಣಿ ಕಾರ್ಯಕ್ರಮ ಮಾಲಿಕೆಯಲ್ಲಿ ಹಿರಿಯ ಸಾಹಿತಿಗಳಾದ 'ಶಿರಿಷ್ ಜೋಶಿ ಅವರ ಬದುಕು ಬರಹ' ಕುರಿತು ಹಿರಿಯ ಸಾಹಿತಿ ಡಾ ಗುರುದೇವಿ ಹುಲ್ಲೆಪ್ಪನವರಮಠ ರವರು ಮಾತನಾಡಿದರು. ಶಿರಿಷ್ ಜೋಶಿ ಅವರ ಪ್ರತಿ ಕೃತಿಗಳು ಆಳವಾಗಿ ಅಧ್ಯಯನ ಮಾಡಿ ಸಂಶೋಧನಾತ್ಮಕ ರೀತಿಯಲ್ಲಿ ಅವನ್ನು ಅರಿತು ರಚಿಸಿದಂತವುಗಳಾಗಿವೆ.ಅವರ ನಡೆ ನುಡಿ,ಆದರ್ಶ ಎಲ್ಲರ ಕುರಿತಾದ ಗೌರವ ನಿಜಕ್ಕೂ ಅನುಕರನಣೀಯ. ಅವರ ವಿಶೇಷ ಕಲೆ ನಿರ್ದೇಶನ. ಅವರ ನಿರ್ದೇಶನದಲ್ಲಿ ಮೂಡಿಬಂದ ಅನೇಕ ನಾಟಕಗಳು ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿದೆ. ಅವರು ಬರೆದ ಸಂಭಾಷಣೆಯಲ್ಲಿ ಮೂಡಿ ಬಂದ ಇಂಗಳೇಮಾರ್ಗ,ಸಾವಿತ್ರಿಬಾಯಿ ಪುಲೆ 1947 ಜುಲೈ 22 ಚಲನಚಿತ್ರಗಳು ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿವೆ. ಅವರಿಂದ ಭಾಷಾಂತರವಾದ ಅನೇಕ ಕೃತಿಗಳು ಮೂಲ ಕೃತಿಯನ್ನೇ ಹೋಲುವಂತಹ ಉತ್ಕೃಷ್ಟತೆ ಹೊಂದಿವೆ. ಸೂಕ್ಷ್ಮ ಗುಣಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕುತೂಹಲ ಕೆರಳಿಸುವ ಅವರ ಕಾದಂಬರಿ ರಚನೆ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ ಅಂತಹ ಮಹಾನ್ ಕೃತಿಗಳ ಅಧ್ಯಯನ ಈಗಿನ ಯುವ ಜನತೆ ಮಾಡಿದ್ದೇ ಆದರೆ ಯುವ ಜನರು ಸಹ ಈ ಸಾಹಿತ್ಯ ಅಭಿರುಚಿ ಯನ್ನು ಬೆಳೆಸಿಕೊಳ್ಳಬಹುದು.ಆ ನಿಟ್ಟಿನಲ್ಲಿ ಈ ದಿನ ಇಟ್ಟಿರುವ ಅವರ ಬದುಕು ಗುರಿತಾದ ಮೆಲಕು ಹಾಕುವ ಕಾರ್ಯಕ್ರಮ ನಿಜಕ್ಕೂ ಅವರ ಸಾಹಿತ್ಯ ಸೇವೆಗೆ ನಾವು ಕೊಟ್ಟಿರುವ ಗೌರವ ಎನ್ನಬಹುದು ಎಂದು ಅವರ ಬದುಕು ಬರಹವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾಹಿತಿ ಪಿ. ಬಿ. ಸ್ವಾಮಿ ಜೋಶಿಯವರ ಕುರಿತಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್ ಇಂಚಲ್ ರವರು ಜೋಶಿಯವರ ಸಮಗ್ರ ಕೃತಿಗಳು ಅತ್ಯಂತ ಗುಣಮಟ್ಟ ಹೊಂದಿದವುಗಳಾಗಿವೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ,ಪಿ ಜಿ ಕೆಂಪಣ್ಣವರ, ಎ. ಎ. ಸನದಿ, ಸುಭಾಷ ಏಣಗಿ, ಅರವಿಂದ ಹುನಗುಂದ,ಜ್ಯೋತಿ ಬದಾಮಿ, ಎಲ್ಎಸ್ ಶಾಸ್ತ್ರಿ ಮಧುಕರ ಗುಂಡೇನಟ್ಟಿ, ಶಾರದಾ ಭೋಜ, ಅನಂತ ಪಪ್ಪು, ಶ್ವೇತಾ ನರಗುಂದ, ಶೈಲಜಾ ಬಿಂಗೆ, ಭಾಗ್ಯಶ್ರೀ ಕುಲಕರ್ಣಿ, ಡಾ ಜಯಂತ ಕಿತ್ತೂರ,ಎಸ್. ಬಿ. ದಳವಾಯಿ,ಶ್ರೀನಿವಾಸ ಪಂಡಿತ, ಎಸ್. ಆರ್, ಕ್ಷಿರಸಾಗರ, ಇಂದಿರಾ ಮೂಟೆಬೆನ್ನೂರು, ಎ. ಆರ್. ಕುಲಕರ್ಣಿ, ಶ್ರೀರಂಗ ಜೋಶಿ ಬಿ ಬಿ ಮಠಪತಿ, ಎಂ. ಬಿ. ಮರಲಕ್ಕನವರ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆರ್. ಬಿ. ಬನಶಂಕರಿ ಪರಿಚಯಿಸಿದರು. ಡಾ.ಹೇಮಾವತಿ ಸೋನೋಳ್ಳಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು
undefined
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ ಅಭಿಮತ